Thursday, 2 April 2020

ಪರಿಸರ ಮಾಲಿನ್ಯ - ಪ್ರತಿಬಂಧಕೋಪಾಯಗಳು

       ನಾವು ವಾಸಿಸುತ್ತಿರುವ ಭೂಮಿಯ ಸುತ್ತಲೂ ಎಲ್ಲ ಜೀವಿಗಳ ಜೀವ ರಕ್ಷಣೆ ಮಾಡುವ ವಾಯುವಿನ (ಗಾಳಿ) ಒಂದು ಪದರವಿದೆ. ಇದರ ನಂತರ ಬರುವದು ನೀರಿನ ಪಾತ್ರ. ಇವೆರಡೂ ಜೀವಿಗಳಿಗೆ ಜೀವಿಸಲು ಅತ್ಯವಶ್ಯಕ ಇದರಲ್ಲಿದೆ. ಮನುಷ್ಯನಿಗೆ ಆಹಾರ ನೀಡುವ ಸಸ್ಯಗಳಿಗೂ, ಗಿಡ-ಮರಗಳಿಗೂ ಇವು ಬೆಕೇಬೆಕು. ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೋಂಡು ಸಸ್ಯಗಳು, ಗಿಡ-ಮರಗಳು ಬೆಳೆಯುತ್ತವೆ. ಈ ಎರಡು ಮೂಲಭೂತ ದ್ರವ್ಯಗಳು (ಗಾಳಿ, ನೀರು) ಉಳಿದ ಗ್ರಹಗಳಲ್ಲಿ ಇಲ್ಲವಾದ ಕಾರಣ ಇಲ್ಲಿ ಜೀವಿಗಳಿಲ್ಲವೆಂದು ಸ್ಥಿರಪಟ್ಟಿದೆ. ಭೂಮಿಯ ಸುತತ್ಲಿರುವ ವಾಯುಮಂಡಲ, ಜಯಸಂಪನ್ಮೂಲ ಮತ್ತು. ನೈಸರ್ಗಿಕವಾಗಿ ಬೆಳೆದ ಕಾಡು-ಮೇಡು ಇವುಗಳಿಗೆ ಪರಸರವೆಂದು ಕರೆಯುತ್ತೇವೆ.

       ಪ್ರರಾರಂಭದಲ್ಲಲಿ ಈ ಪರಿಸರವನ್ನು  ಅವಲಂಬಿಸಿದ ‌‌‍ಜೀವಿಗಳ ಸಂಖ್ಯೆ ನಗಣ್ಯವಾಗಿತ್ತು. ಹೀಗಾಗಿ ಮಾಲಿನ್ಯ ಎಂಬ ಪದಪ್ರಯೋಗವೇ. ಇರಲಿಲ್ಲ ವೆಂದರೂ ನಡೆಯುುತ್ತದೆ. ಜನಸಂಖ್ಯಾ ಬೆಳೆದಂತೆಲ್ಲ  ಪರಿಸರದ  ಮೇಲೆ ಒತ್ತಡ ಅಧಿಕವಾಗುತ್ತಾ ನಡೆಯಿತು. ಬೆಳೆಯುತ್ತಿರುವ ಜನಸಂಖ್ಯೆಗೆ ವಸತಿ ಸೌಲಭ್ಯ ಒದಗಿಸಲು ಕಾಡನ್ನು ಕಡಿಯುವದು ಅನಿವಾರ್ಯವಾದದ್ದೇನೋ ನಜ. ಆದರೆ ಆ ನೆಪದಲ್ಲಿ ಬೆಲೆಯುಳ್ಳ ಕಟ್ಟಿಗೆಯ ಕಳ್ಳ ಸಾಗಾಣಿಕೆಗೆ ಇಂಬ ದೊರೆಯಿತು. ಅದರ ಪರಿಣಾಮವಾಗಿ ವಿವೇಚನೆ ಇಲ್ಲದೆ ಕಾಡಿನ ನಾಶ ನಡೆದಿದೆ. ಇದರ ದುಷ್ಪರಿಣಾಮಗಳು ಕೆಲ ಜಾತಿಯ ಪಶು - ಪಕ್ಷಿಗಳು ವಿನಾದಶ ಅಂಚು ತಲುಪಿದೆ. ತಮಗಿದ್ದ ನೆಲೆ ತಪ್ಪಿದ ನಂತರ ಕೆಲ ಕಾಡುಪ್ರಾಣಿಗಳು ಕಾಡನ್ನು ತೋರೆದು ನಾಡಿನೋಳಕ್ಕೆ ನುಗ್ಗಿವೆ.

       ನಿತ್ಯ ಹರಿದ್ವರ್ಣದ ಕಾಡಿಗೂ ಸಂರುದ್ಧ ಮಳೆಗೂ ಗಾಢ ಸಂಬಂಧ ಉಂಟು. ವಿವೇಚನಾರಹಿತ ಕಾಡಿನ ನಾಶದಿಂದ ಮಳೆಗಾಲ ಅನಿಶ್ಚಿತ ವಾಗಿದೆ. ಕಾಡಿನ ನಾಶದಿಂದ ಬಂಜರು ಪ್ರದೇಶ ಹೆಚ್ಚಾಗಿ ಪರಿಸರದ ಸಮತೋಲನ ತಪ್ಪಿ ಒಂದೋ ಅತಿವೃಷ್ಠಿಯಾಗುತ್ತದೆ, ಇಲ್ಲವೇ ಮಳೆಯೇ ಆಗುವುದಿಲ್ಲ. ಇತ್ತೀಚೆಗಂತೂ ಇದರ ಅನುಭವ ಎಲ್ಲರಿಗೂ ಆಗಿದೆ.

     ಬೆಳೆಯುತ್ತಿರುವ ಜನಸಂಖ್ಯೆಗೆ ವಸ್ತುಗಳನ್ನು ಪೊರೈಸಲು ಅನೇಕ ಕಾರ್ಖಾನೆಗಳು ತಲೆಎತ್ತಿವೆ. ಈ ಕಾರ್ಖಾನೆಗಳು ಉಗುಳುವ ವಿಷಾನಿಲಗಳು ಹವೆಯಲ್ಲಿ ಸೇರಿ ಮತ್ತು ಅವುಗಳ ತ್ಯಾಜ್ಯ ವಸ್ತುಗಳು ಕೆರೆಗಳು, ನದಿ, ತೊರೆಗಳನ್ನು ಸೇರಿ ವಿವಿಧ ರೀತಿಯ ಮಾಲಿನ್ಯ ಉಂಟು ಮಾಡಿವೆ. ಪರಿಣಾಮವಾಗಿ ಮಾನವ ಹೇಳಲಾರದಷ್ಟು ರೋಗಿ - ರುಜಿನಗಳಿಂದ ಬಳಲುತ್ತಿದ್ದಾನೆ.

      ಇವೆಲ್ಲದರ ಜೊತೆಗೆ ಶಬ್ದ ಮಾಲಿನ್ಯ ಸೇರಿ ಮಾನವನ ಶ್ರವಣ ಶಕ್ತಿಯ ಮೇಲೆ ವಿಪರೀತಿ ಪರಿಣಾಮ ಬೀರಿ ಕಿವುಡುತನ ಹೆಚ್ಚಾಗುತ್ತದೆ.

       ಆದರಿಂದ ಇವೆಲ್ಲ ಅಂಶಗಳನ್ನು ಗಮನಿಸಿ ಇರುವ ಕಾಡನ್ನು ಉಳಿಸಿಕೊಳ್ಳಬೇಕು. ಅದರ ಜೊತೆಗೆ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಈ ಕ್ರಮದಿಂದ ಮಳೆ ಬೆಳೆ ಸರಿಯಾಗಿ ಆಗುತ್ತದೆ. ಮತ್ತು ವಾಯುವಿನಲ್ಲಿ ಬೆರೆತಿರುವ ಕಾರ್ಬನ್, ಡೈಆಕ್ಸೈಡ್ ಮುಂತಾದ ಕಲ್ಮಶಗಳನ್ನು ಗಿಡ - ಮಗಳನ್ನು ಹೀರಿಕೊಂಡು ಮಾನವನಿಗೆ ಉಸಿರಾಡಲು ಶುದ್ಧ ಹವೆ ದೊರೆತು ನೀರು ಮತ್ತು ಹವೆಯಿಂದ ಉದ್ಬವಿಸುವ ಎಷ್ಟೋ ರೋಗ -ರುಜಿನಗಳು ಹತೋಟಿಗೆ ಬಂದು ಮಾನವನ ಜೀವನ ಆಹ್ಲಾದಕರವಾಗುತ್ತದೆ.

       ಮೇಲಿನ ಪರಿಹಾರವೂಂದೇ ಸಮಸ್ಯೆಗೆ ಉತ್ತರ ನೀಡಲಾರದು. ಇದರ ಜೊತೆಗೆ ಜನಸಂಖ್ಯಾ. ನಿಯಂತ್ರಣಕ್ಕೂ ಆದ್ಯತೆ ಕೊಡಬೇಕು. ಒಟ್ಟಿನಲ್ಲಿ ಆರಣ್ಯ ಅಭಿವೃದ್ಧಿ ಜೊತೆಗೆ ಜನಸಂಖ್ಯಾ ನಿಯಂತ್ರಣದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

2 comments:

ದೀಪಾವಳಿ

    ಭಾರತೀಯರು ಪ್ರತಿಯೊಂದು  ಹಬ್ಬವನ್ನೂ ಆಚರಿಸುತ್ತಾರೆ. ಭಾರತೀಯ ಹಬ್ಬಗಳಲ್ಲೊಂದದಾದ ಬರೀ ದೀಪಾಲಂಕಾರದಿಂದ ಕೂಡಿ, ಎಲ್ಲ ಅಜ್ಞಾನವನ್ನೂ ದೂರಗೊಳಿಸುವ ಹಬ್ಬವಾದ ದೀಪಾವಳಿ...